November 1, 2024

Chitradurga hoysala

Kannada news portal

ಪ್ರತಿಭಟನ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಶಾಸಕ ಟಿ ರಘುಮೂರ್ತಿ

1 min read

ಒಳ ಮೀಸಲಾತಿ ಜಾರಿಗಾಗಿ ಶಾಸಕ ಕಛೇರಿ ಮುಂದೆ ಪ್ರತಿಭಟನೆ

ಪ್ರತಿಭಟನ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಶಾಸಕ ಟಿ ರಘುಮೂರ್ತಿ

ವರದಿ:ದ್ಯಾಮ ಕುಮಾರ್,

CHITRADURGA HOYSALA NEWS/

ಚಳ್ಳಕೆರೆ :

ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿಯನ್ನು ಜಾರಿ ಮಾಡಲು ಆದೇಶ ಹೊರಡಿಸಿದ್ದರು ರಾಜ್ಯ ಸರ್ಕಾರ ಜಾರಿಗೊಳಿಸಲು ಮೀನಾಮೇಷ ತೊರುತ್ತಿದು ಅತಿ ಶೀಘ್ರದಲ್ಲೇ ಒಳ ಮೀಸಲಾತಿಗಾಗಿ ಜಾರಿಗಾಗಿ ಮಾದಿಗ ಸಮುದಾಯದಿಂದ ಪ್ರತಿಭಟನೆ ನಡೆಸಿದರು.

ನಗರದ ಶಾಸಕರ ಕಛೇರಿ ಎದುರು ಮಾದಿಗ ಮಾಹಾಸಭ, ಮಾದಿಗ ದಂಡೋರ, ದಲಿತ ಸಂಘರ್ಷ ಸಮಿತಿ, ಹಾಗೂ ವಿವಿಧ ದಲಿತ ಸಂಘಟನೆಗಳಿಂದ ಶೀಘ್ರವೇ ಒಳ ಮೀಸಲಾತಿ ಜಾರಿಗಾಗಿ ಪ್ರತಿಭಟನೆ ನಡೆಸಲಾಯಿತು.

ಮಾದಿಗ ಸಮುದಾಯದ 30 ವರ್ಷದ ಹೋರಾಟಕ್ಕೆ ಪ್ರತಿಫಲವಾಗಿ 2024 ಆಗಸ್ಟ್ 1ರಂದು ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿಯನ್ನು ಜಾರಿ ಮಾಡಲು ಆಯಾ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ಇದೆ ಎಂದು ತೀರ್ಪು ನೀಡಿದೆ.ಹಾಗಾಗಿ ಒಳ ಮೀಸಲಾತಿ ಜಾರಿ ಬಗ್ಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲು ತಾವು ಶ್ರಮವಹಿಸಬೇಕೆಂದು ಶಾಸಕರ ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದರ ಮುಖಾಂತರ ಶಾಸಕರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಜಿಪಂ ಮಾಜಿ ಸದಸ್ಯ ಪ್ರಕಾಶ್ ಮೂರ್ತಿ ಮಾತನಾಡಿ ಸುಮಾರು 30 ವರ್ಷಗಳಿಂದ ಮಾದಿಗ ಸಮುದಾಯ ಹೋರಾಟ ಮಾಡುತ್ತ ಬಂದಿದೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಚಿತ್ರಮರ್ಗದಲ್ಲಿ ಬಹುದೊಡ್ಡ ಮಟ್ಟದಲ್ಲಿ ಎಸ್ಸಿ ಎಸ್ಟಿ ಸಮಾವೇಶವನ್ನು ನಡೆಸಿದ್ದು

ಈ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಸೇರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಜೊತೆಗೆ ಒಳ ಮೀಸಲಾತಿಯನ್ನು 6ನೇಯಾದಾಗಿ ಘೋಷಣೆ ಮಾಡುವ ಬಗ್ಗೆ ಮೊದಲನೇ ಅಧಿವೇಶನದಲ್ಲಿಯೇ ಒಳ ಮೀಸಲಾತಿಯನ್ನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಈ ಭರವಸೆಯನ್ನು ಒಪ್ಪಿಕೊಂಡ ಮಾದಿಗ ಸಮುದಾಯವು 2023ರ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಬಹುಮತಗಳಿಂದ ಗೆಲ್ಲಿಸಿ,ಅಧಿಕಾರ ನೀಡಿದ್ದೇವೆ. ಚುನಾವಣೆ ಮುಗಿದು 2 ವರ್ಷ ಕಳೆಯುತ್ತಾ ಬಂದರು ಕೊಟ್ಟ ಭರವಸೆಯನ್ನು ಈಡೇರಿಸದ ಮೌನವಾಗಿರುವುದಕ್ಕೆ
ಕಾಂಗ್ರೆಸ್ ಪಕ್ಷವು ಬಹು ಸಂಖ್ಯಾತ ಮಾದಿಗರಿಗೆ ಮೋಸ ಮಾಡುತ ಬಂದಿದೆ ಎಂದರು‌.

ಈಗಾಗಲೆ ಮಾದಿಗರ ಸ್ಥಿತಿಗತಿ ಬಗ್ಗೆ ಎ.ಜೆ ಸದಾಶಿವ ಆಯೋಗದ ವರದಿ ಒಳಗೊಂಡಂತೆ ಅನೇಕ ವರದಿಗಳು ನಿಮ್ಮ ಮುಂದಿದೆ. 2011 ರ ಜನಗಣತಿ ವರದಿಗಳು ನಿಮ್ಮ ಮುಂದಿವೆ ತಾವು ಮೊದಲ ಬಾರಿ ಮುಖ್ಯಮಂತ್ರಿ ಯಾದಗಿನಿಂದ ಭರವಸಗಳನ್ನು ಕೊಡುತ್ತಾ ಬಂದಿದ್ದಿರಿ, ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಿರಿ. ಅನೇಕ ಭಾರಿ ಮಾಧ್ಯಮಗಳಲ್ಲಿ ಪ್ರಚಾರ ನಿಡಿದ್ದೀರಿ. ಇಷ್ಟಾದರು ಸುಪ್ರೀಂ ಕೊರ್ಟ್ ತೀರ್ಪು ನೀಡಿ ಎರಡು ತಿಂಗಳು ಕಳಿತ ಬಂದರು ಒಳಮಿಸಲಾತಿ ಜಾರಿಮಾಡದಿರುವುದಕ್ಕೆ. ಮಾದಿಗರ ಮೇಲೆ ನಿಮಗೆ ಗೌರವ ಇಲ್ವಾ ನೀವು ಕೊಟ್ಟಂತ ಹೇಳಿಕೆ ಬರಿ ರಾಜಕೀಯವಾಗಿ ಮಾದಿಗರನ್ನು ಬಳಿಸಿಕೊಳ್ಳಕ್ಕೆ ಮಾತ್ರ ಹೇಳಿಕೆ ನೀಡಿದ್ದಿರಿ ಎಂದು ಭಾವಿಸ ಬೇಕಾಗುತ್ತದೆ.ವಿಜಯಕುಮಾರ್ ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು ನಗರಸಭೆ ಸದಸ್ಯರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ನಾಮ ನಿರ್ದೇಶನ ಸದಸ್ಯರಾದ ಬಡಗಿ ಪಾಪಣ್ಣ, ವೀರಭದ್ರ, ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಮುಖಂಡರುಗಳಾದ ಭೀಮನಕೆರೆ ಶಿವಮೂರ್ತಿ, ವಿಜಯಕುಮಾರ್, ಬಸವರಾಜ್, ಕೃಷ್ಣಮೂರ್ತಿ, ಬೋರಣ್ಣ, ಶಿವಣ್ಣ, ಆನಂದಕುಮಾ‌ರ್, ಹೊನ್ನೂರು ಸ್ವಾಮಿ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಸಮುದಾಯದವರು ಉಪಸ್ಥಿತರಿದ್ದರು.

 01:ಮಾದಿಗ ದಂಡೋರ ಸಂಘದ

ರಾಷ್ಟ್ರೀಯ ಅಧ್ಯಕ್ಷರಾದ ಮಂದಕೃಷ್ಣ ಮಾದಿಗರವರ 30 ವರ್ಷಗಳ ಹೋರಾಟ ಪ್ರತಿಫಲವಾಗಿ, ಸುಪ್ರಿಂ ಕೋರ್ಟ್ ಆಗಸ್ಟ್ ಒಂದು 2021ರಂದು ಒಳ ಮೀಸಲಾತಿ ಎಸ್.ಸಿ/ಎಸ್.ಟಿ ಒಳಮಿಸಲಾತಿ ಆಸಂಮಿಧಾನಿಕ ಎಂಬ ತೀರ್ಪು ರದ್ದುಗೊಳಿಸಿ ನ್ಯಾಯಧೀಶರಾದ ಡಿ.ವೈ.ಚಂದ್ರಚೂಡ್ ರವರ ನೇತ್ರತ್ವದ 7 ಜನ ನ್ಯಾಯ ಮೂರ್ತಿಗಳು ಒಳಗೊಂಡಂತಃ ಪೀಠವು ಎಸಿ/ಎಸ್ಟಿ ಒಳಮಿಸಲಾತಿ ಸಂವಿಧಾನವಾಕವಾದ್ದು ಎಂದು ತೀರ್ಪು ನೀಡಿದ್ದು ರಾಜ್ಯ ಸರ್ಕಾರ ಮೀನಾಮೇಷ ತೊರದೆ ಶೀಘ್ರ ಒಳ ಮೀಸಲಾತಿ ಜಾರಿಗೂಳಿಸ ಬೇಕು ಎಂದು ಆಗ್ರಹಿಸಿದರು.

ಮಾದಿಗ ದಂಡೋರ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ

ಮನವಿ ಸ್ವೀಕರಿಸಿ ಇದೇ ತಿಂಗಳ 21 ರಂದು ಒಳ ಮೀಸಲಾತಿಯ ಬೇಡಿಕೆಯನ್ನು ಸಿಎಂ ನವರಿಗೆ ಮನವಿ ಮೂಲಕ ಗಮನ ತಂದಿದ್ದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. 2023ರ ಚುನಾವಣಾ ಪೂರ್ವದಲ್ಲಿ ಚಿತ್ರದುರ್ಗದಲ್ಲಿ ಎಸ್ಸಿ ಎಸ್ಟಿ ಐಕ್ಯತ ಸಮಾವೇಶದಲ್ಲಿ ಹತ್ತು ಅಂಶಗಳ ಬೇಡಿಕೆಯಲ್ಲಿ ಒಳ ಮೀಸಲಾತಿಯು ಒಂದಾಗಿದ್ದು ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೊಳಿಸುವಂತೆ ತೀರ್ಪು ನೀಡಿದ್ದು ಸಿದ್ದರಾಮಯ್ಯ ರೊಂದಿಗೆ ಚರ್ಚಿಸಿ ಶೀಘ್ರ ಜಾರಿಗೂಳಿಸುವ ಭರವಸೆ ನೀಡಿದರು.

ಶಾಸಕ ಟಿ ರಘುಮೂರ್ತಿ

About The Author

Leave a Reply

Your email address will not be published. Required fields are marked *