ಮದುವೆಗೆ ಸಿಎಂ ಡಿಸಿಎಂ ಆಗಮನ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಐಜಿ, ಎಸ್ಪಿ
1 min read
ಶಾಸಕ ಟಿ ರಘಮೂರ್ತಿ ಮಗಳ ಮದುವೆಗೆ ಸಕಲ ಸಿದ್ಧತೆಯಿಂದ ಮದುವೆಗೆ ಬೃಹತ್ ಮಂಟಪ ನಿರ್ಮಾಣ
ಮದುವೆಗೆ ಸಿಎಂ ಡಿಸಿಎಂ ಆಗಮನ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಐಜಿ, ಎಸ್ಪಿ
CHITRADURGA HOYSALS NEWS:
ಚಳ್ಳಕೆರೆ:
ನಗರದಲ್ಲಿ ಸೋಮವಾರ ನಡೆಯುವ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಮೂರು ಬಾರಿ ಶಾಸಕರಾದ ಟಿ ರಘಮೂರ್ತಿ ಅವರ ಮಗಳ ಮದುವೆಗೆ ಎಚ್‌ಪಿಪಿಸಿ ಕಾಲೇಜಿನ ಡಿ ಸುಧಾಕರ್ ಅವರ ಕ್ರೀಡಾಂಗಣದಲ್ಲಿ ಬೃಹತ್ ಮದುವೆ ಮಂಟಪ ನಿರ್ಮಾಣ ಮಾಡುತ್ತಿದ್ದು, ಮದುವೆಗೆ ಸಿಎಂ ಡಿಸಿಎಂ ಆಗಮಿಸುತ್ತಿರುವುದರಿಂದ ಇಂದು ದಾವಣಗೆರೆ ಪೊಲೀಸ್ ಮಹಾನಿರೀಕ್ಷಕ ರಮೇಶ್ ಕುಮಾರ್, ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್ ಭಂಡಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಟಿ ರಘುಮೂರ್ತಿ ಅವರ ಮಗಳ ಮದುವೆಗೆ ಬೃಹತ್ ಮಂಟಪವು ನಿರ್ಮಾಣವಾಗುತ್ತಿತ್ತು ಈ ಮದುವೆಗೆ ಎರಡು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದ್ದು ಈ ಮದುವೆಗೆ ಬರುವ ಜನಗಳಿಗೆ ಯಾವುದೇ ತರಹದ ಕೊರತೆಯಾಗದಂತೆ ಬೃಹತ್ತಾದ ಎರಡು ಮಂಟಪಗಳು ನಿರ್ಮಾಣ ಮಾಡಿದ್ದು ಅಧಿಕ ಜನ ಸೇರುವ ನಿರೀಕ್ಷೆಯನ್ನು ಸಹ ಮಾಡಲಾಗಿದೆ.
ಮದುವೆ ನಡೆಯುವ ಮಂಟಪ ದ್ವಾರ ಬಾಗಿಲು ದೇವಸ್ಥಾನದ ಗೋಪುರದಂತೆ ನಿರ್ಮಾಣ ಮಾಡಿದ್ದು ಈ ಮದುವೆಗೆ ಬರುವ ಜನರಿಗೆ ಹೊರಗಿನಿಂದಲೆ ಆಕರ್ಷಣೆ ಮಾಡುವಂತಹ ರೀತಿ ನಿರ್ಮಾಣ ಮಾಡಲಾಗಿದೆ.ಒಳಗಡೆ ನೆಡೆಯುವ ಮದುವೆ ಕಾರ್ಯಕ್ಕೆ ಟೆಂಪೋಸೆಟ್ ನಿರ್ಮಾಣ ಮಾಡಿದ್ದಾರೆ.
ಈ ಮದುವೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದು ಇಂದು ಪೋಲಿಸ್ ಮಹಾ ನಿರೀಕ್ಷಕ ರಮೇಶ ಕುಮಾರ್ ಜಿಲ್ಲಾಧಿಕಾರಿಗಳಾದ ವೆಂಕಟೇಶ್, ಜಿಲ್ಲಾ ವರಿಷ್ಟಧಿಕಾರಿಗಳದ ರಮೇಶ್ ಕುಮಾರ್ ಭಂಡಾರಿ, ಭೇಟಿ ನೀಡಿ ಎಲಿಕ್ಯಾಪ್ಟರ್ ನಿಲ್ದಾಣ ಹಾಗೂ ಸೂಕ್ತ ಬಂದೋಬಸ್ತು ವ್ಯವಸ್ಥೆ ಕಲ್ಪಿಸಲು ವಿವಿವಾಹ ಸ್ಥಳ ಹಾಗೂ ಎಲಿಕ್ಯಾಪ್ಟರ್ ನಿಲ್ದಾಣ ಸ್ಥಳ ಪರಿಶೀಲನೆ ನಡೆಸಿ ಸಿಎಂ ಡಿಸಿಎಂ ಭದ್ರತೆ ನೀಡಲು ಅಗತ್ಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪ್ರತಿ ಮನೆ ಮನೆಗೂ ವಿವಾಹ ಆಮಂತಣ ಪತ್ರಿಕೆ ಹಂಚಿಕೆ:
ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಬರುವ 40 ಗ್ರಾಮ ಪಂಚಾಯಿತಿಗಳ ಪ್ರತಿಯೊಂದು ಹಳ್ಳಿಗಳ ಮನೆಮನೆಗೂ ಪ್ರತಿ ಗ್ರಾಮಗಳಲ್ಲಿ ಇರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಯೊಂದು ಮನೆಗಳಿಗೂ ತೆರಳಿ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.
ಮದುವೆಗೆ ಬರುವ ಪ್ರತಿಯೊಬ್ಬರಿಗೂ ಒಂದೇ ಊಟದ ವ್ಯವಸ್ಥೆ:
ಶಾಸಕರ ಪುತ್ರಿ ಮದುವೆಗೆ ಬರುವ ಪ್ರತಿಯೊಬ್ಬ ಗಣ್ಯರಿಗೂ ಸಾರ್ವಜನಿಕರಿಗೂ ಎಲ್ಲರಿಗೂ ಒಂದೇ ರೀತಿಯ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಊಟದ ವ್ಯವಸ್ಥೆಗೆ ವಿವಿಧ ರೀತಿಯ ಕೌಂಟರ್ ಗಳನ್ನು ಮಾಡಲಾಗಿದೆ. ಐದು ಕಡೆ ಬಫೆ ಸಿಸ್ಟಮ್ ಅನ್ನು ಸಹ ಮಾಡಲಾಗಿದೆ.
ಭೋಜನ ವ್ಯವಸ್ಥೆಗೆ 25 ಐಟಂಗಳು:
ಜನಪ್ರಿಯ ಶಾಸಕರು ಮಗಳ ಮದುವೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಭೋಜನ ವ್ಯವಸ್ಥೆ ಮಾಡಲಾಗಿರುತ್ತದೆ ಇದರಲ್ಲಿ 25 ಐಟಂ ಮಾಡಿದ್ದು ಐದು ರೀತಿಯ ರೈಸ್ ಐಟಂ ಆರು ರೀತಿಯ ಪಲ್ಯ ನಾಲ್ಕು ತರದ ಸ್ವೀಟ್ ಐಟಂ ಇದ್ದರೆ ಐಟಂ ಮಾಡಲಾಗಿರುತ್ತದೆ. ಹಾಗೂ ಪ್ರತಿಯೊಬ್ಬರಿಗೂ ಬಾಳೆ ಎಲೆಯ ಊಟದ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.
1300 ಜನ ಅಡುಗೆಯನ್ನು ತಯಾರು ಮಾಡಲು ಭಟ್ಟರುಗಳು ಹಾಗೂ ಸಿಬ್ಬಂದಿಗಳು ಇರುತ್ತಾರ. ಊಟ ಮಾಡಲು 5,000 ಹಾಸನಗಳು ಒಂದೇ ಸಮಯದಲ್ಲಿ ಊಟ ಮಾಡಬಹುದಾಗಿದೆ.
ಮದುವೆ ಮಂಟಪದ ಸ್ಥಳ ಪರಿಶೀಲನೆ ನಡೆಸಿದ ಐಜಿ ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿಗಳ, ಜೊತೆಗೆ ತಹಶೀಲ್ದಾರ್ ರೆಹಾನ್ ಪಾಷಾ, ಡಿವೈಎಸ್ಪಿ ರಾಜಣ್ಣ, ಪಿಐ ದೇಸಾಯಿ, ಪಿಎಸ್ಐ ಗಳಾದ ಸತೀಶ್ ನಾಯಕ್, ಶಿವರಾಜ್, ನಗರಸಭೆ ಪೌರ ಆಯುಕ್ತರು ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.