ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುವ ನಿಲಯಮೇಲ್ವಿಚಾರ ವಿರುದ್ಧ ಪ್ರತಿಭಟನೆ
1 min readವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುವ ನಿಲಯಮೇಲ್ವಿಚಾರ ವಿರುದ್ಧ ಪ್ರತಿಭಟನೆ
ಚಿತ್ರದುರ್ಗ ಹೊಯ್ಸಳ ನ್ಯೂಸ್:
ಚಳ್ಳಕೆರೆ :
ಬಿಸಿಎಂ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಿಲಯ ಮೇಲ್ವಿಚಾರಕರು ಮದ್ಯಪಾನ ಸೇವನೆಯನ್ನು ಮಾಡಿ ನಿಲಯದೊಳಗೆ ಬಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ತಾಲೂಕು ಕಚೇರಿ ಮುಂದೆ. ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮನವಿ ಸಲ್ಲಿಸಿದರು.
ನಗರದ ಪಾವಗಡ ರಸ್ತೆಯಲ್ಲಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಿಸಿಎಂ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಿಲಯ ಮೇಲ್ವಿಚಾರಕರು ಮದ್ಯಪಾನ ಸೇವನೆಯನ್ನು ಮಾಡಿ ನಿಲಯದೊಳಗೆ ಬಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವುದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಬೆದರಿಕೆ ಹಾಕುವುದು, ವಿಕೆಟ್ ಗಳಿಂದ ಹಲ್ಲೆ ನಡೆಸಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡಕ್ಕೆ ಸಿಲುಕುವ ಹಾಗೆ ನಿಂದಿಸುತಿದ್ದಾರೆ ಎಂದು ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳು ನಿಲಯದಲ್ಲಿ ಇರುವ ಸಮಸ್ಯೆಗಳನ್ನು ಪ್ರಶ್ನೆ ಮಾಡಿದರೆ ಅಂತಹ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಗುರಿಯಾಗಿಸಿಕೊಂಡು ಬೆದರಿಸುವುದು ನಿಲಯದಿಂದ ಹೂರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಿಲಯದ ಸೌಲಭ್ಯಗಳನ್ನು ಪ್ರಶ್ನೆ ಮಾಡಿ ನಿಲಯದ ತೊಂದರೆಗಳನ್ನು ಮೇಲಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಹೇಳಿದರೆ.ನಮ್ಮ ಮಾವರಾದ ಸುಬ್ರಹ್ಮಣ್ಯ ನಾಯಕ್ ರವರು ಜಿಲ್ಲಾ ಕಲ್ಯಾಣಾಧಿಕಾರಿ ಯಾಗಿರುವುದರಿಂದ ನೀವು ಎಲ್ಲೇ ಹೋಗಿ ದೂರು ನೀಡಿದ್ದರು ನಾನು ಹೆದರುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಹೇದರಿಸುತಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದರ ಮೂಲಕ ತಹಸಿಲ್ದಾರ್ ಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಕಾರ್ತಿಕ್, ಉದಯ್ ಕರಿಬಸವ, ಅಜಯ್, ಮಧು ಇನ್ನೂ ಹಲವು ವಿದ್ಯಾರ್ಥಿಗಳು ಇದ್ದರು