ಶ್ರೀ ನಾರಾಯಣ ಗುರು ಜಯಂತಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ:ಶ್ರೀ ರೇಣುಕಾನಂದ ಸ್ವಾಮೀಜಿ
1 min read
ಸೇಂದಿ ನಿಷೇಧಿಸಿದ ಸರ್ಕಾರ ಈಡಿಗ ಸಮಾಜಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ
ಶ್ರೀ ನಾರಾಯಣ ಗುರು ಜಯಂತಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ: ಶ್ರೀ ರೇಣುಕಾನಂದ ಸ್ವಾಮೀಜಿ
ಚಿತ್ರದುರ್ಗ ಹೊಯ್ಸಳ:
ಹೊಸದುರ್ಗ:
ಈಡಿಗ ಸಮಾಜ ವೃತ್ತಿಯನ್ನು ಕಳೆದುಕೊಂಡು ಕಂಗಾಲಾಗಿದೆ ಸರ್ಕಾರ ತಕ್ಷಣ ಈಡಿಗರಿಗೆ ನ್ಯಾಯ ಕೊಡಿಸಲು ಮುಂದಾಗ ಬೇಕು ಎಂದು ಶಿವಮೊಗ್ಗ ನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಅಗ್ರಹ ಪಡಿಸಿದರು,
ಅವರು ಹೊಸದುರ್ಗ ತಾಲೂಕಿನ ಈಡಿಗ ಸಮಾಜದ ಜನಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಈಡಿಗ ಸಮಾಜ ಸೇಂದಿ ವೃತ್ತಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದರು ಆದರೆ ಸಮಾಜದ ಮಕ್ಕಳು ಶಿಕ್ಷಣ ಪಡೆಯದೆ ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ ಸಾಮಾಜಿಕ ಸ್ವಾಸ್ಥಕೊಸ್ಕರ ಸೇಂದಿ ನಿಷೇಧಿಸಿದ ಸರ್ಕಾರ ಪರ್ಯಾಯ ಉದ್ಯೋಗ ಅಥವಾ ಪರ್ಯಾಯ ವ್ಯವಸ್ಥೆಯನ್ನು ಮಾಡದೇ ಇರುವ ಕಾರಣ ಸೇಂದಿಯನ್ನೇ ವೃತ್ತಿ ನಂಬಿ ಜೀವನ ಮಾಡಿದ ಬಡ ಈಡಿಗ ಸಮಾಜ ಇಂದು ಕಾಯಕವಿಲ್ಲದೆ ಕಂಗಾಲಾಗಿದೆ, ನಾರಾಯಣ ಗುರುಗಳ ತತ್ವ ಆದರ್ಶ ದೊಂದಿಗೆ ಧಾರ್ಮಿಕ ಪ್ರಜ್ಞೆಯನ್ನು ಅಳವಡಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಲು ಸಮಾಜಕ್ಕೆ ಸ್ವಾಮೀಜಿ ಕಿವಿಮಾತು ಹೇಳಿದರು.
ಚಿತ್ರದುರ್ಗದಲ್ಲಿ 20 ರಂದು ನಡೆಯಲಿರುವ ಶ್ರೀ ನಾರಾಯಣ ಗುರು ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ ಸರ್ಕಾರಕ್ಕೆ ಸಮಾಜದ ಸ್ತಿತಿಗತಿಗಳನ್ನು ಮನವರಿಕೆ ಮಾಡಲು ಇದೊಂದು ಉತ್ತಮ ಸಂದರ್ಭ ಎಂದು ಸಮಾಜ ಬಾಂಧವರಿಗೆ ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಈಡಿಗ ಸಂಘದ ಅಧ್ಯಕ್ಷ ಜೀವನ್. ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್. ನಿರ್ದೇಶಕರಾದ ರವಿಕುಮಾರ್. ಹೊಸದುರ್ಗ ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.