September 21, 2024

Chitradurga hoysala

Kannada news portal

ಜಿಹಾದಿ ಮುಸ್ಲಿಂ ಯುವಕರಿಂದ ಕಲ್ಲು ತೂರಾಟ : ಗಣೇಶೋತ್ಸವ ಮಂಡಳಿಗಳ ಒಕ್ಕೂಟದವತಿಯಿಂದ ಪ್ರತಿಭಟನಾ ಮೆರವಣಿಗೆ ಜಿಲ್ಲಾಡಲಿತಕ್ಕೆ ಮನವಿ

1 min read


ಜಿಹಾದಿ ಮುಸ್ಲಿಂ ಯುವಕರಿಂದ ಕಲ್ಲು ತೂರಾಟ :

ಗಣೇಶೋತ್ಸವ ಮಂಡಳಿಗಳ ಒಕ್ಕೂಟದವತಿಯಿಂದ ಪ್ರತಿಭಟನಾ ಮೆರವಣಿಗೆ ಜಿಲ್ಲಾಡಲಿತಕ್ಕೆ ಮನವಿ

ಚಿತ್ರದುರ್ಗ ಹೊಯ್ಸಳ:

ಚಿತ್ರದುರ್ಗ:
ಮಂಡ್ಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣಪತಿ ವಿಸರ್ಜನೆ ವೇಳೆ ಜಿಹಾದಿ ಮುಸ್ಲಿಂ ಯುವಕರಿಂದ ಕಲ್ಲು ತೂರಾಟ ಖಂಡಿಸಿ ಚಿತ್ರದುರ್ಗ ನಾಗರಿಕರ ಸಮಿತಿ ಮತ್ತು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಒಕ್ಕೂಟದವತಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಜಿಲ್ಲಾಡಲಿತಕ್ಕೆ ಮನವಿ ಸಲ್ಲಿಸಲಾಯಿತು.

ಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ಗಣಪತಿ ವಿಸರ್ಜನೆ ವೇಳೆ ಜಿಹಾದಿ ಮುಸ್ಲಿಂ ಯುವಕರಿಂದ (ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ದಾಳಿ ಮತ್ತು ಮಾರಕಾಸ್ತ್ರ) ಝಳಪಿಸಿ ಹಿಂದುಗಳ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವಿಶ್ವ ವಿಶ್ವ ಹಿಂದೂ ಪರಿಷತ್ ಹಿಂದೂ ಪರಿಷದ್ ಖಂಡನೆ ಮಾಡಿ ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆಗ್ರಹಿಸಲಾಯಿತು.

ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ಇಂದು ವಿಸರ್ಜನಾ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ಜಿಹಾದಿ ಯುವಕರ ಗುಂಪು ಏಕಾಏಕಿ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಜಿಹಾದಿ ಯುವಕರು ಗಣೇಶ ಮೂರ್ತಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮೆರವಣಿಗೆ ವೇಳೆ ದರ್ಗಾ ಮುಂಭಾಗ ಗಣೇಶನ ಮೆರವಣಿಗೆ ನಡೆಸದಂತೆ ಜಿಹಾದಿಗಳು ಇಂತಹ ಕೃತ್ಯ ಮಾಡಿದ್ದಾರೆ ಎಂದು ದೂರಿದ್ದಾರೆ.

ಈ ವೇಳೆ ಜಿಹಾದಿ ಯುವಕರು ಮಾರಕಾಸ್ತ್ರ ಜಳಪಿಸಿದ್ದಾರೆ ಅಲ್ಲದೆ ಹಿಂದೂ ಯುವಕರ ಮೇಲೆ ದಾಳಿ ನಡೆಸಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಈ ಕೃತ್ಯ ಅತ್ಯಂತ ಖಂಡನೀಯ. ತಕ್ಷಣ ಜಿಹಾದಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಈ ಕೃತ್ಯ ಉದ್ದೇಶಪೂರ್ವಕವಾಗಿದ್ದು ಅಲ್ಲದೆ ಪೂರ್ವಯೋಜಿತ ಕೃತ್ಯವಾಗಿದೆ. ಈ ಜಿಹಾದಿ ಯುವಕರ ಹಿಂದೆ ನಿಷೇಧಿತ ಇಸ್ಲಾಮಿಕ್ ಮೂಲಭೂತ ಸಂಘಟನೆಗಳ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದ್ದು ಹಾಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಮನವಿ ಮಾಡಲಾಯಿತು.

ಇದೇ ಸಂದರ್ಭದಲ್ಲಿ ನಗರದ ಆನೇ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿವತಿಯಿಂದಲೂ ಸಹಾ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ ಗಣಪತಿ ಮೇರವಣಿಗೆ ‘ ಸಂಧರ್ಭದಲ್ಲಿ ಗಲಭೆ ಮಾಡಿದ ಕಿಡಿಗೇಡಿಗಳಿಗೆ ಬಂಧಿಸಲು ಹಾಗೂ ಜಿಲ್ಲೆಯ ಎಲ್ಲ ಗಣಪತಿ ಪೆಂಡಾಲ್‍ಗಳಿಗೆ ಸೂಕ್ತ ಭದ್ರತೆ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.

ಈ ಘಟನೆಯಿಂದ ರಾಜ್ಯದಲ್ಲಿ ಆತಂಕದ ವಾತಾವರಣ ಮನೆಮಾಡಿದೆ. ಕಿಡಿಗೇಡಿಗಳಿಂದ ಇಂತಹ ಕೋಮುಗಲಭೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಕಿಡಿಗೇಡಿಗಳನ್ನು ಕೋಡಲೆ ಬಂಧಿಸಬೇಕು ಹಾಗೂ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಗಟ್ಟಿಮಾಡಬೇಕಿದೆ.

ಚಿತ್ರದುರ್ಗದ ಐತಿಹಾಸಿಕ ಗಣಪತಿಯಾದ ಶ್ರೀ ಪ್ರಸನ್ನ ಗಣಪತಿಯ 67ನೇ ವರ್ಷದ ಪೂಜಾಮಹೋತ್ಸವ ಸೆ.07 ರಿಂದ ದಿನಾಂಕ:15 ರವರೆಗೆ ವಿಶೇಷ ಕಾರ್ಯಕ್ರಮ ಹಾಗೂ ಪೂಜಾ ಕಾರ್ಯಕ್ರಮ ನಡೆಯುತ್ತಿದೆ ಸೆ. 15ರ ಭಾನುವಾರ ಸಂಜೆ ಗಣಪತಿಯ ಉತ್ಸವ ಇರುವುದರಿಂದ ಅದೇ ದಿನ ಚಂದ್ರವಳ್ಳಿಯ ಕೆರೆ ಬಳಿ ಇರುವ ನೀರಿನ ತೊಟ್ಟಿಯಲ್ಲಿ ಗಣಪತಿ ಉದ್ವಾಸನ ಇರುವುದರಿಂದ ಈ ಎಲ್ಲಾ ಕಾರ್ಯಕ್ರಮಗಳಿಗೆ ಸೂಕ್ತ ಭದ್ರತೆ ಹಾಗೂ ಬಂದೋಬಸ್ತ್ ಹಾಗೂ ರಕ್ಷಣೆ ನೀಡಲು ಜೊತೆಗೆ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗಣಪತಿ ಪೆಂಡಾಲ್ ಗಳಿಗೆ ಭದ್ರತೆ ಒದಗಿಸಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಬದರಿನಾಥ್, 2024ರ ಹಿಂದೂ ಮಹಾ ಗಣಪತಿ ಸಮಿತಿಯ ಅಧ್ಯಕ್ಷರಾದ ನಯನ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜಿ.ಎಂ.ಸುರೇಶ್, ನಗರಸಭಾ ಮಾಜಿ ಸದಸ್ಯರಾದ ನವೀನ್ ಚಾಲುಕ್ಯ, ಕೇಶವ, ವಿಶ್ವ ಹಿಂದೂ ಪರಿಷದ್‍ನ ಪ್ರಭಂಜನ್, ಶ್ರೀ ಪ್ರಸನ್ನ ಗಣಪತಿಯ ಅಧ್ಯಕ್ಷರಾದ ಗೋಪಾಲ್‍ರಾವ್ ಜಾಧವ್, ಬೇದ್ರೇ ನಾಗರಾಜ್, ಭಾನು ಮೂರ್ತಿ, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದಕ್ಕೂ ಮುನ್ನಾ ನಗರದ ಆನೇ ಬಾಗಿಲ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು.

About The Author

Leave a Reply

Your email address will not be published. Required fields are marked *