ಕೋಡಿ ಬಿದ್ದ ಕರೆಕಲ್ ಕೆರೆಗೆ ಬಾಗಿನ ಸಮರ್ಪಿಸಿದ ಶಾಸಕ
1 min readಕೋಡಿ ಬಿದ್ದ ಕರೆಕಲ್ ಕೆರೆಗೆ ಬಾಗಿನ ಸಮರ್ಪಿಸಿದ ಶಾಸಕ
CHITRADURGA HOYSALA NEWS/
ಚಳ್ಳಕೆರೆ:
ಕಳೆದ ವರ್ಷ ತಾಲೂಕಿನಲ್ಲಿ ಮಳೆ ಬಾರದೆ ಬರಗಾಲ ಉಂಟಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು ಈ ಬಾರಿ ಸಕಾಲದಲ್ಲಿ ಮಳೆ ಬಾರದೆ ಕಳೆದ ಹತ್ತು ದಿನಗಳಿಂದ ಸುರಿದ ಮಳೆಯಿಂದ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದು ಕೆರೆಗಳೆಲ್ಲ ಕಂಗೊಳಿಸುತ್ತಿವೆ.
ಹಿಂಗಾರು ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿ ಕೊಡಿ ಬೀಳುತ್ತಿದ್ದು ನಗರದ ಕರೆಕಲ್ ಕೆರೆ 56 ವರ್ಷಗಳ ನಂತರ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ಟಿ ರಘುಮೂರ್ತಿಗಂಗಾ ಪೂಜೆ ನೆರವೇರಿಸಿ ಬಾಗೀನ ಸಮರ್ಪಿಸಿದರು.
ಈ ವೇಳೆ ಮಾತಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿದ್ದರು ಸರಿಯಾದ ವೇಳೆಯಲ್ಲಿ ಮಳೆ ಬಾರದೆ ಇರುವುದರಿಂದ ರೈತರಿಗೆ ಬೆಳೆ ನಷ್ಟವಾಗಿದೆ ಇದಕ್ಕೆ ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷರಾದ ಸುಜಾತ ಪ್ರಹ್ಲಾದ್, ನಗರಸಭೆ ಸದಸ್ಯರುಗಳಾದ ಮಲ್ಲಿಕಾರ್ಜುನ, ಕವಿತಾ ಬೋರಯ್ಯ, ಸುಮಾ ಭರಮಯ್ಯ, ರಾಘವೇಂದ್ರ, ರಮೇಶ್ ಗೌಡ, ನಾಮ ನಿರ್ದೇಶನ ಸದಸ್ಯರಾದ ಬಡಗಿ ಪಾಪಣ್ಣ, ಮುಖಂಡರುಗಳಾದ ವೀರೇಶ್, ಕೃಷ್ಣಮೂರ್ತಿ, ಪ್ರಹ್ಲಾದ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.