September 21, 2024

Chitradurga hoysala

Kannada news portal

ಮಾದಿಗ ಸಮುದಾಯ ಮಕ್ಕಳಿಗೆ ಸರ್ಕಾರಿ ಕೆಲಸಗಳೇ ಸಿಗುತ್ತಿಲ್ಲ: ಜಿ.ಎಸ್ ಮಂಜುನಾಥ್

1 min read

ಮಾದಿಗ ಸಮುದಾಯ ಮಕ್ಕಳಿಗೆ ಸರ್ಕಾರಿ ಕೆಲಸಗಳೇ ಸಿಗುತ್ತಿಲ್ಲ: ಜಿ.ಎಸ್ ಮಂಜುನಾಥ್

ಚಿತ್ರದುರ್ಗ ಹೊಯ್ಸಳ
ಹೊಸದುರ್ಗ:

ನಾನು ಎಸ್.ಎಸ್‌.ಎಲ್‌.ಸಿ ಯಲ್ಲಿ 39% ತೆಗೆದು ಒಂದು ಜನಾಂಗದ ನಿಗಮದ ಅಧ್ಯಕ್ಷನಾಗಿದ್ದೇನೆ. ಅಂದರೆ 94% ತೆಗೆದವರಿಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಕೆಲಸ ಸಿಗುವುದು ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ ರಾಧಾಕೃಷ್ಣ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆದ ಹೊಸದುರ್ಗ ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ವತಿಯಿಂದ 12 ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಂಸದ ಗೋವಿಂದ ಕಾರಜೋಳರವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಯತ್ನ ಪಡದೇ ಹೊರತು ಯಾವುದೇ ಅವಕಾಶ ಸಿಗುವುದಿಲ್ಲ. ಶೇಕಡಾ 90% ನಮ್ಮ ಮಾದಿಗ ಸಮುದಾಯದ ಮಕ್ಕಳು ಎಸ್ ಎಸ್ ಎಲ್ ಸಿ, ಹಾಗೂ ಪಿ ಯು ಸಿ ಗೆ ತಮ್ಮ ಶಿಕ್ಷಣವನ್ನು ಮುಗಿಸುತ್ತಿದ್ದಾರೆ. ತಮ್ಮ ಮಕ್ಕಳು ಹಾಸ್ಟೆಟೆಲ್ನಲ್ಲಿ ವಿದ್ಯಾಭ್ಯಾಸ ಮಾಡಿಸುವ ಕೆಲಸವನ್ನು ನಮ್ಮ ನಾಯಕರು ಮಾಡುತ್ತಿಲ್ಲ. ತಂದೆ ತಾಯಿಗಳು ಇದರ ಜವಾಬ್ದಾರಿ ಹೊತ್ತು ನಮ್ಮ ಸಮುದಾಯದ ಮಕ್ಕಳ ಅಭಿವೃದ್ಧಿ ಮಾಡಬೇಕಾಗಿದೆ. ಮನೆಯಲ್ಲಿರುವ ಒಬ್ಬ ತಾಯಿ ಕಷ್ಟಪಟ್ಟು ಮಗುವಿನ ಶಿಕ್ಷಣ ಕೊಡಿಸಿದರೆ ವೃದ್ಧಾಪ್ಯದಲ್ಲಿ ನೆಮ್ಮದಿಯ ಜೀವನ ನಡೆಸಬಹುದು ಎಂದರು.

ಮಲದ ಪಿಟ್ ಗುಂಡಿಗಳು ತುಂಬಿದರೆ, ರಸ್ತೆಯಲ್ಲಿ ಬಿದ್ದಿರುವ ವಲಸನ್ನ, ನಗರದ ರಸ್ತೆಯಲ್ಲಿ ಸ್ವಚ್ಛಗೊಳಿಸುವವರು ಮಾದಿಗರು, ನಮ್ಮ ಹಾಗೆ ಯಾವ ಸಮುದಾಯದವರು ಸಾರ್ವಜನಿಕರ ಕೆಲಸವನ್ನು ಮಾಡುತ್ತಿಲ್ಲ, ನೆನಪಿರಲಿ ಮಾದಿಗ ಸಮುದಾಯದ ಬಂಧುಗಳೇ ನಮ್ಮ ನಮ್ಮ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿದಾಗ ಇಂತಹ ಅನಿಷ್ಟ ಪದ್ಧತಿಗಳಿಂದ ನಾವು ದೂರ ಬಂದು ಸರ್ಕಾರಿ ಉದ್ಯೋಗ ಪಡೆದು ಕುಟುಂಬವನ್ನು ನೆಮ್ಮದಿಯಡೆಗೆ ಕೊಂಡೊಯ್ಯಬಹುದು ಎಂದರು.

ಮೀಸಲಾತಿಯಿಂದ ಅವಕಾಶ ಪಡೆದುಕೊಂಡ ನೌಕರರು ಮತ್ತು ರಾಜಕಾರಣಿಗಳು ನಮ್ಮ ಸಮುದಾಯಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳಬೇಕಿದೆ ರಾಜಕೀಯವನ್ನು ಬೇರ್ಪಡಿಸಿ ಸಮುದಾಯ ಎಂದಾಗ ಎಲ್ಲರೂ ಒಗ್ಗಟ್ಟಾಗಬೇಕು ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲಿ ನೇರ ಸಾಲ ಕೊಡುವ ಅವಕಾಶವಿದ್ದು ಈ ಭಾಗದ ಜಮೀನಿಲ್ಲದ ರೈತರಿಗೆ ಜಮೀನು ಕೊಡಿಸುವುದು. ಎರಡು ಲಕ್ಷ ನೇರ ಸಾಲ ಕೊಡಿಸುವುದು, ಬೋರ್ವೆಲ್ ಪೂರೈಸುವ ಕೆಲಸ ಮಾಡುತ್ತೇನೆ ಎಂದರು.

ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ,ಬಿ, ಕೃಷ್ಣಪ್ಪ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ದೇವಿರಾಜ್ ಮಾತನಾಡಿ ಯುವ ಪ್ರತಿಭೆಗಳಿಗೆ ಪುರಸ್ಕಾರ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ, ಮುಂದಿನ 40 ವರ್ಷಗಳ ನಮ್ಮ ಪೀಳಿಗೆಗೆ ಇಂತಹ ಕಾರ್ಯಕ್ರಮಗಳು ನೆನಪಿನಲ್ಲಿ ಇರುವಂತಾಗಬೇಕು ನಾವು ಇಲ್ಲಿ ಇಲ್ಲದಿರಬಹುದು ಆದರೆ ನಮ್ಮ ಸಾಧನೆಗಳನ್ನ ಮುಂದಿನ ಪೀಳಿಗೆಗೆ ಮಾತನಾಡುತ್ತಾರೆ. ಸಮಾಜ ವ್ಯವಸ್ಥೆಯಲ್ಲಿ ಎಲ್ಲಾ ಸಮುದಾಯಗಳು ನಾಗಾಲೋಟದಲ್ಲಿ ಸ್ಪರ್ಧೆ ಮಾಡುತ್ತಿವೆ. ಈ ಜವಾಬ್ದಾರಿಯನ್ನು ಅರಿತು ನಮ್ಮ ಮಕ್ಕಳ ಅಭ್ಯಾಸಕ್ಕೆ ಹೆಚ್ಚಿನ ಮಹತ್ವವನ್ನು ನಾವು ನೀವೆಲ್ಲರೂ ಕೊಡಲೇಬೇಕು.

ಸನ್ಮಾನ್ಯ ಸಮಾಜದ ಅಭಿನಯಕ್ಕೆ ಯಾರು ಶ್ರಮಿಸುತ್ತಾರೋ ಅವರೆಲ್ಲರಿಗೂ ಯುವಕರ ಮನಸ್ಸು ಇರುತ್ತದೆ ಇತಿಹಾಸದ ಪುಟಗಳಲ್ಲಿ ತಿರುಗಿ ನೋಡಿದಾಗ 12ನೇ ಶತಮಾನದ ಬಸವಾಧೀಶ ಶರಣರ ಮಾದರ ಚೆನ್ನಯ್ಯರ ಸಂದೇಶವನ್ನ ನಾವೆಲ್ಲರೂ ತಿಳಿದುಕೊಳ್ಳಬೇಕು.

ಪ್ರಪಂಚದಲ್ಲಿಯೇ ಶ್ರೇಷ್ಠ ಶಿಕ್ಷಣ ತಜ್ಞರಾದ ಅಂಬೇಡ್ಕರ್ ರವರ ವಿಚಾರಗಳನ್ನ ನಮ್ಮ ಯುವ ಪೀಳಿಗೆಗೆ ತಿಳಿಸಬೇಕಿದೆ. ನಾವು ಸತ್ತರೂ ಬದುಕಬೇಕೆಂಬ ಆಸೆ ನಮಗಿದ್ದರೆ ಇರುವಷ್ಟು ದಿನ ಸಮಾಜಕ್ಕಾಗಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಆಗ ಮಾತ್ರ ನಾವು ಇತಿಹಾಸ ಪುಟದಲ್ಲಿ ಇರಬಹುದು. ಶಿಕ್ಷಣದಿಂದ ಮನೋಬಲ ಮತ್ತು ಮನೋಸ್ಥೈರ್ಯವನ್ನ ಹೆಚ್ಚಿಸಿಕೊಳ್ಳಬಹುದು. ದಿನದಿಂದ ಗೌರವಗಳು ನಮ್ಮ ಮನೆಯ ಭಾವನೆಗೆ ಬರುತ್ತವೆ. ಮಾದಿಗ ಸಮುದಾಯದ ಮುತ್ತು ರತ್ನಗಳನ್ನ ಸನ್ಮಾನಿಸುವ ಕೆಲಸ ಮಾಡುತ್ತಿರುವ ಮಾದಿಗ ಸಾಂಸ್ಕೃತಿಕ ನೌಕರ ಸಂಘದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳು ಎಂದರು.

ಚಿತ್ರದುರ್ಗ ಕೌಶಲ್ಯ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಿ. ಉಮೇಶ್ ಮಾತನಾಡಿ ನಮ್ಮ ಸಮಾಜದ ಒಳಿತಿಗೆ ನಮ್ಮ ಸಮವೇನು ಎಂಬುದನ್ನು ಎಲ್ಲಾ ನೌಕರರು ಮತ್ತು ಸಮಾಜ ಬಾಂಧವರು ಅರಿಯಬೇಕಿದೆ.

ಸಮಾನಮನಸ್ಕರೆಲ್ಲ ಸೇರಿ ಕಳೆದ 12 ವರ್ಷಗಳಿಂದ ಮಾದಿಗ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಈ ಪ್ರತಿಭಾ ಪುರಸ್ಕಾರವನ್ನ ಮಾಡಿಕೊಂಡು ಬರುತ್ತಿದ್ದೇವೆ. ಪ್ರಸ್ತುತ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವುದು ನಮ್ಮ ಜವಾಬ್ದಾರಿ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ, ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್ ಜಗದೀಶ್ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮೂರ್ತಪ್ಪ, ಉಪಾನಂದನಾಧಿಕಾರಿ ಮಾರುತಿ ಪ್ರಸಾದ್, ನಾಕಿಕೆರೆ ತಿಪ್ಪಯ್ಯ, ಹೊಸದುರ್ಗ ಮಾದಿಗ ಯುವ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ,ಸಮಾಜ ಸೇವಕ ಗೂಳಿಹಟ್ಟಿ ಕೃಷ್ಣಮೂರ್ತಿ, ತುಂಬಿನಕೆರೆ ಬಸವರಾಜ್, ಹನುಮಂತಪ್ಪ, ಖ್ಯಾತ ನಿರೂಪಕಿ ಕಾವೇರಿ, ಗೋದಪ್ಪ ಹನುಮಂತಪ್ಪ ಹೊರಕೇರಪ್ಪ ಶೇಖರಪ್ಪ ರಂಗಸ್ವಾಮಿ ಬಸವರಾಜು ಚನ್ನರಾಯಪ್ಪ ಕುಮಾರಸ್ವಾಮಿ ಮಂಜುಳಾ ಮಲ್ಲಿಕಾರ್ಜುನ್ ಮಂಜುನಾಥ ಹಾಗೂ ಸಮಾಜದ ಮುಖಂಡರು ಕಲಾವಿದರು
ಪಾಲ್ಕೊಂಡಿದ್ದರು.

About The Author

Leave a Reply

Your email address will not be published. Required fields are marked *